Untitled Document
Sign Up | Login    
Dynamic website and Portals
  

Related News

ಭಾರತ ಹೊಸ ಎತ್ತರಕ್ಕೆ ಬೆಳೆಯುತ್ತಿದೆಃ ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯ ವಿದ್ಯಾರ್ಥಿಗಳಿಗೆ ಪ್ರಧಾನಿ ಮೋದಿ

ಒಂದು ದಿನದ ಜಮ್ಮು-ಕಾಶ್ಮೀರ ಭೇಟಿಯ ಸಂದರ್ಭದಲ್ಲಿ ಕತ್ರಾಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನು ಉದ್ಘಾಟಿಸಿ, ಮಾತಾ ವೈಷ್ಣೋದೇವಿ ವಿಶ್ವವಿದ್ಯಾಲಯದಲ್ಲಿ ನಡೆದ ಘಟಿಕೋತ್ಸವದಲ್ಲಿ ಭಾಗವಹಿಸಿದರು. ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ನಿಮ್ಮ ತಂದೆ ತಾಯಿಗಳು ನಿಮಗೆ ಮಾಡಿದ್ದನ್ನು...

ಪಾಕ್ ಪುಂಡಾಟಕ್ಕೆ ತಕ್ಕ ಉತ್ತರ ನೀಡಲು ನಾವು ಸಿದ್ದ: ಪರಿಕ್ಕರ್

ಜಮ್ಮು-ಕಶ್ಮೀರದ ಗಡಿಯಲ್ಲಿ ಪಾಕ್ ಸೇನೆಯ ಪುಂಡಾಟಕ್ಕೆ ಗರಂ ಆಗಿರುವ ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವಾಗ್ದಾಳಿ ನಡೆಸಿದ್ದಾರೆ. ಗಡಿಯಲ್ಲಿ ಪಾಕ್ ಸೇನೆಯಿಂದ ನಡೆಯುತ್ತಿರುವ ನಿರಂತರ ಗುಂಡಿನ ದಾಳಿ, ಕದನ ವಿರಾಮ ಉಲ್ಲಂಘನೆ ಹಿನ್ನಲೆಯಲ್ಲಿ ಉತ್ತರ ಪ್ರದೇಶದ ಲಖನೌದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ...

ಪ್ರತಿಯೊಬ್ಬ ಭಾರತೀಯನ ಸಾವಿಗೆ 4 ಪಾಕಿಸ್ತಾನಿಗಳನ್ನು ಕೊಲ್ಲುತ್ತೇವೆ: ಸಾಧ್ವಿ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆಯ ಗುಂಡಿನ ದಾಳಿ ಕುರಿತು ಪ್ರತಿಕ್ರಿಯಿಸಿರುವ ಕೇಂದ್ರ ಆಹಾರ ಮತ್ತು ಸರಬರಾಜು ರಾಜ್ಯ ಸಚಿವೆ ಸಾಧ್ವಿ ನಿರಂಜನ್ ಜ್ಯೋತಿ ಪ್ರತಿ ಭಾರತೀಯ ಯೋಧನ ಸಾವಿಗೆ ಭಾರತ ನಾಲ್ಕು ಪಾಕಿಸ್ತಾನಿಗಳನ್ನು ಕೊಲ್ಲಲಿದೆ ಎಂದು ಹೇಳುವ ಮೂಲಕ ಮತ್ತೆ ವಿವಾದ...

ಒಮರ್ ಅಬ್ದುಲ್ಲಾ ನಿವಾಸದ ಬಳಿ ಗುಂಡಿನ ದಾಳಿ

ಭಾರತದ ಗಡಿಯಲ್ಲಿ ಪಾಕಿಸ್ತಾನ ತನ್ನ ಪುಂಡಾಟಿಕೆ ಮುಂದುವರೆಸಿದೆ. ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ನಿವಾಸದ ಬಳಿ ಪಾಕ್ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ. ಬೆಳಿಗ್ಗೆ 7.30ರ ಸುಮಾರಿನಲ್ಲಿ ಶ್ರೀನಗರದಲ್ಲಿರುವ ಒಮರ್ ಅಬ್ದುಲ್ಲಾ ಮನೆ ಬಳಿ ಯೋಧನೊಬ್ಬ ಗಾಳಿಯಲ್ಲಿ 15 ಸುತ್ತು ಗುಂಡು ಹಾರಿಸಿದ್ದಾನೆ...

ಪಾಕ್ ನಿಂದ ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿ ಯಶ್ವಸ್ವಿ ಉಡ್ಡಯನ

ಎರಡು ದಿನಗಳ ಹಿಂದಷ್ಟೇ ಭಾರತದ ಹಲವು ನಗರಗಳನ್ನು ಗುರಿ ಇರಿಸಿ ಧ್ವಂಸಗೊಳಿಸಬಲ್ಲ ಅಣ್ವಸ್ತ್ರ ವಾಹಕ ಕ್ಷಿಪಣಿಗಳ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ ಕೈಗೊಂಡಿದ್ದ ಪಾಕಿಸ್ಥಾನ, ಈಗ ಮತ್ತೆ 900 ಕಿ.ಮೀ. ದೂರ ವ್ಯಾಪ್ತಿಯ ಅಣ್ವಸ್ತ್ರ ವಾಹಕ ಖಂಡಾಂತರ ಕ್ಷಿಪಣಿಯ ಪರೀಕ್ಷಾ ಉಡ್ಡಯನವನ್ನು ಯಶಸ್ವಿಯಾಗಿ...

ಗಡಿಯಲ್ಲಿ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕ್ ಸೈನಿಕರಿಗೆ ಚೀನಾ ತರಬೇತಿ

ಪದೇ ಪದೇ ಭಾರತದ ಗಡಿಯಲ್ಲಿ ಕ್ಯಾತೆ ತೆಗೆಯುವ ಪಾಕಿಸ್ತಾನ ಸೈನಿಕರಿಗೆ ಚೀನಾ ನೆರವು ನೀಡುತ್ತಿರುವ ಅಘಾತಕಾರಿ ಅಂಶ ಬೆಳಕಿಗೆ ಬಂದಿದೆ. ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೈನಿಕರಿಗೆ ಚೀನಾ ತರಬೇತಿ ನೀಡುತ್ತಿದ್ದು, ಭಾರತದ ಮೇಲೆ ದಾಳಿ ನಡೆಸಲು ಸಹಾಯ ಮಾಡುತ್ತಿರುವುದು ಖಾತ್ರಿಯಾಗಿದೆ. ರಜೌರಿ...

ಭಾರತದ ಎಚ್ಚರಿಕೆ ಬಳಿಕವೂ ಗಡಿಯಲ್ಲಿ ನಿಲ್ಲದ ಪಾಕ್ ಕ್ಯಾತೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಪುಂಡಾಟಿಕೆ ಮುಂದುವರೆಸಿದ್ದು, ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆ ಬಳಿ ಪಾಕ್ ಸೇನೆ ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಜಮ್ಮು-ಕಾಶ್ಮೀರದ ಅರ್ನಿಯಾ ಸೆಕ್ಟರ್ ಬಳಿ ಪಾಕ್ ಸೇನೆ ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಭಾರೀ ಗುಂಡಿನ ದಾಳಿ ನಡೆಸಿದೆ....

ಪಾಕ್ ಸೇನೆಯಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಭಾರತೀಯ ಸೇನಾ ಶಿಬಿಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಪೂಂಚ್ ಜಿಲ್ಲೆಯ ಕೆರ್ನಿ ಸೆಕ್ಟರ್ ಹಾಗೂ 4 ಭಾರತೀಯ ಸೇನಾ ಶಿಬಿರಗಳ ಮೇಲೆ ಪಾಕ್ ಸೇನೆ ಅಪ್ರಚೋದಿತ ಗುಂಡಿನ...

ಪಾಕ್ ಸೇನಾ ನೆಲೆ ಮೇಲೆ ಬಿಎಸ್ ಎಫ್ ದಾಳಿ: ಪಾಕಿಸ್ತಾನಕ್ಕೆ ಭಾರತದ ಪ್ರತ್ಯುತ್ತರ

ಭಾರತ-ಪಾಕಿಸ್ತಾನ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ಪುಂಡಾಟ ಮುಂದುವರೆದಿದ್ದು, ಭಾರತೀಯ ಸೇನಾ ಶಿಬಿರಗಳನ್ನು, ನಾಗರಿಕರನ್ನು ಗುರಿಯಾಗಿಸಿಕೊಂಡು ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನೆ ಕೂಡ ಪ್ರತ್ಯುತ್ತರ ನೀಡುತ್ತಿದ್ದು, ಗಡಿಯಲ್ಲಿ ಅಘೋಷಿತ ಕದನದ ವಾತಾವರಣ ನಿರ್ಮಾಣವಾಗಿದೆ. 70 ಭಾರತೀಯ ಸೇನಾ ಶಿಬಿರ ಹಾಗೂ...

ಆತ್ಮರಕ್ಷಣೆಗಾಗಿ ಪ್ರತಿದಾಳಿ ಅವಶ್ಯವಾಗಿದೆ: ಅರುಣ್ ಜೇಟ್ಲಿ

ನಮ್ಮ ಭೂ ಭಾಗ ಹಾಗೂ ಜನರ ರಕ್ಷಣೆ ಮಾಡುವುದು ಸರ್ಕಾರದ ಕರ್ತವ್ಯ. ಆತ್ಮರಕ್ಷಣೆಗಾಗಿ ಪಾಕ್ ಸೇನೆ ವಿರುದ್ಧ ಪ್ರತಿದಾಳಿ ನಡೆಸಲೇ ಬೇಕಾಗಿದೆ ಎಂದು ರಕ್ಷಣಾ ಸಚಿವ ಅರುಣ್ ಜೇಟ್ಲಿ ಸ್ಪಷ್ಟಪಡಿಸಿದ್ದಾರೆ. ನವದೆಹಲಿಯಲ್ಲಿ ಮಾತನಾಡಿದ ಅವರು, ಜಮ್ಮು-ಕಾಶ್ಮೀರದ ಅಂತರಾಷ್ಟ್ರೀಯ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ...

ಕಾಂಗ್ರೆಸ್-ಎನ್ ಸಿಪಿ ಭ್ರಷ್ಟಾಚಾರವಾದಿಗಳು: ಪ್ರಧಾನಿ ಮೋದಿ

ಕಾಂಗ್ರೆಸ್ ಮತ್ತು ಎನ್ ಸಿಪಿ ಎರಡೂ ಪಕ್ಷಗಳಲ್ಲಿ ಯಾವುದೇ ವ್ಯತ್ಯಾಸವಿಲ್ಲ, ಎರಡೂ ಪಕ್ಷಗಳೂ ಭ್ರಷ್ಟಾಚಾರವಾದಿಗಳು ಎಂದು ಪ್ರಧಾನಿ ನರೇಂದ್ರ ಮೋದಿ ವಾಗ್ದಾಳಿ ನಡೆಸಿದ್ದಾರೆ. ಮಹಾರಾಷ್ಟ್ರ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ರಾಹುರಿಯಲ್ಲಿ ನಡೆದ ಬಿಜೆಪಿ ರ್ಯಾಲಿಯಲ್ಲಿ ಮಾತನಾಡಿದ ಅವರು, ಕಳೆದ 15 ವರ್ಷಗಳಿಂದಲೂ ಮಹಾರಾಷ್ಟ್ರದಲ್ಲಿ...

ಭಾರತ-ಪಾಕ್ ನಡುವೆ ಮಾತುಕತೆ: ವಿಶ್ವಸಂಸ್ಥೆ ಇಂಗಿತ

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪುಂಡಾಟಿಕೆ ಮುಂದುವರೆಸಿದ್ದು, ಉದ್ವಿಗ್ನಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನಲೆಯಲ್ಲಿ ಭಾರತ-ಪಾಕಿಸ್ತಾನ ನಡುವೆ ಮಾತುಕತೆ ನಡೆಸಲು ವಿಶ್ವಸಂಸ್ಥೆ ಇಂಗಿತ ವ್ಯಕ್ತಪಡಿಸಿದೆ. ನಿರಂತರವಾಗಿ ಗಡಿ ನಿಯಮ ಉಲ್ಲಂಘನೆಮಾಡುತ್ತಿರುವ ಪಾಕ್ ಸೇನೆ, ಅಪ್ರಚೋದಿತ ಗುಂಡಿನ ದಾಳಿ ನಡೆಸಿದೆ. ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಪಾಕ್...

ಗಡಿಯಲ್ಲಿ ಪಾಕ್ ಕ್ಯಾತೆ: ಪ್ರಧಾನಿ ಮೌನವಾಗಿರುವುದೇಕೆ-ಕಾಂಗ್ರೆಸ್

ಜಮ್ಮು-ಕಾಶ್ಮೀರ ಗಡಿಯಲ್ಲಿ ಪಾಕಿಸ್ತಾನ ಪದೇ ಪದೇ ಕದನ ವಿರಾಮ ಉಲ್ಲಂಘನೆ ಮಾಡಿ ಭಾರತೀಯ ಯೋಧರ ಮೇಲೆ ಗುಂಡಿನ ದಾಳಿ ನಡೆಸುತ್ತಿದ್ದರೂ ಪ್ರಧಾನಿ ನರೇಂದ್ರ ಮೋದಿ ಮೌನವಾಗಿರುವುದೇಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ. ಗಡಿಯಲ್ಲಿ ಪಾಕ್ ಸೇನೆ ಪ್ರತಿದಿನ ಕ್ಯಾತೆ ತೆಗೆಯುತ್ತಿದ್ದರೂ ಮೌನ ವಹಿಸಿರುವ ಪ್ರಧಾನಿ...

ಗಡಿಯಲ್ಲಿ ಜಮಾವಣೆಗೊಂಡಿರುವ 2000 ಉಗ್ರರು: ಗುಪ್ತಚರ ಇಲಾಖೆ ಮಾಹಿತಿ

ಜಮ್ಮು-ಕಾಶ್ಮೀರ ಗಡಿಯಲ್ಲಿ ಕ್ಯಾತೆ ಮುಂದುವರೆಸಿರುವ ಪಾಕಿಸ್ತಾನ ಕಳೆದೆರಡು ದಿನಗಳಿಂದ ಅಂತರಾಷ್ಟ್ರೀಯ ಗಡಿ ಹಾಗೂ ಗಡಿ ನಿಯಂತ್ರಣ ರೇಖೆಯಲ್ಲಿ ಭಾರೀ ಪ್ರಮಾಣದಲ್ಲಿ ಗುಂಡಿನ ದಾಳಿ ನಡೆಸಿದೆ. ಪಾಕ್ ಸೇನೆಯ ಈ ಕೃತ್ಯಕ್ಕೆ ಭಾರತೀಯ ಸೇನೆ ಕೂಡ ಪ್ರತಿದಾಳಿ ನಡೆಸಿದ್ದು, ಭಾರತೀಯ ಸೇನೆ...

ಜಮ್ಮು-ಕಾಶ್ಮೀರದಲ್ಲಿ ಮುಂದುವರೆದ ಪಾಕ್ ಗುಂಡಿನ ದಾಳಿ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಇಲ್ಲಿನ ಮೇಂದಾರ್ ವಲಯದಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಭಾರತೀಯ ಸೇನಾ ಶಿಬಿರಗಳನ್ನು ಗುರಿಯಾಗಿಸಿಕೊಂಡು ಈ ದಾಳಿ ನಡೆಸಲಾಗಿದ್ದು, ಕಳೆದ 72 ಗಂಟೆಗಳಲ್ಲಿ 5ನೇ ಬಾರಿ ಪಾಕ್ ಸೇನೆ ಕದನ ವಿರಾಮ...

ಗಡಿಯಲ್ಲಿ ಉಗ್ರರ ದಾಳಿ: ಭಾರತೀಯ ಯೋಧ ಬಲಿ

ಜಮ್ಮು-ಕಾಶ್ಮೀರದಲ್ಲಿ ಪಾಕ್ ಸೇನೆಯಿಂದ ಒಂದೆಡೆ ಗುಂಡಿನ ದಾಳಿ ಮುಂದುವರೆದರೆ ಇನ್ನೊಂದೆಡೆ ಉಗ್ರರ ದಾಳಿ ಮುಂದುವರೆದಿದೆ. ಗಡಿಯಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿಗೆ ಓರ್ವ ಭಾರತೀಯ ಯೋಧ ಬಲಿಯಾಗಿದ್ದಾರೆ. ಜಮ್ಮುವಿನ ಕುಪ್ವಾರ ಪ್ರದೇಶದಲ್ಲಿನ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯ ಬಳಿ ಉಗ್ರರು ನಡೆಸಿದ ಗುಂಡಿನ...

ಗಡಿಯಲ್ಲಿ ತೀವ್ರಗೊಂಡ ಪಾಕ್ ದಾಳಿ: ಪಾಕ್ ವಿರುದ್ಧ ಯುದ್ಧಕ್ಕೆ ಶಿವಸೇನೆ ಆಗ್ರಹ

ಜಮ್ಮು-ಕಾಶೀರದ ಗಡಿಯಲ್ಲಿ ಕಳೆದ ಕೆಲ ದಿನಗಳಿಂದ ನಿರಂತರ ಗುಂಡಿನ ದಾಳಿಯಲ್ಲಿ ತೊಡಗಿರುವ ಪಾಕ್ ಸೇನೆ, ತನ್ನ ಕೃತ್ಯ ಮುಂದುವರೆಸುವ ಮೂಲಕ ಭಾರತವನ್ನು ಇನ್ನಷ್ಟು ಕೆಣಕುವ ಯತ್ನ ನಡೆಸಿದೆ. ಕಳೆದ 15ದಿನಗಳಲ್ಲಿ ಪಾಕಿಸ್ತಾನ 21ಬಾರಿ ಕದನ ವಿರಾಮ ಉಲ್ಲಂಘನೆಮಾಡಿದೆ. ಆಗಸ್ಟ್ ತಿಂಗಳೊಂದರಲ್ಲೇ 23ಬಾರಿ, ಜು.16ರಿಂದ...

ಭಾರತಕ್ಕೆ ಶಸ್ತ್ರಾಸ್ತ್ರಗಳ ಕೊರತೆ

ಜಮ್ಮು-ಕಾಶ್ಮೀರದ ಗಡಿಯಲ್ಲಿ ಪಾಕ್ ಸೇನೆ ನಿರಂತರವಾಗಿ ಗುಂಡಿನ ದಾಳಿ ನಡೆಸುವ ಮೂಲಕ ಭಾರತದೊಂದಿಗೆ ಪದೇ ಪದೇ ಕ್ಯಾತೆ ತೆಗೆಯುತ್ತಿದ್ದು, ಒಂದುವೇಳೆ ಪಾಕಿಸ್ತಾನದ ವಿರುದ್ಧ ಭಾರತ ಯುದ್ಧ ಘೋಷಣೆಯಾದರೆ ಭಾರತ ಸಂಕಷ್ಟಕ್ಕೀಡಾಗಲಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಪಾಕಿಸ್ತಾನದ ವಿರುದ್ಧ ಯುದ್ಧ ಸಾರಬೇಕು ಎಂಬ...

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ: ಗಡಿಯಲ್ಲಿ ಉದ್ವಿಗ್ನ ವಾತಾವರಣ

ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಅರ್ನಿಯಾ, ಆರ್.ಎಸ್.ಪುರಗಳಲ್ಲಿ ಪಾಕ್ ಸೇನೆಯ ಅಪ್ರಚೋದಿತ ಗುಂಡಿನ ದಾಳಿ ಮುಂದುವರೆದಿದ್ದು, ಉದ್ವಿಗ್ನ ವಾತಾವರಣ ಉಂಟಾಗಿದೆ. ಅರ್ನಿಯಾ, ಆರ್.ಎಸ್.ಪುರಗಳಲ್ಲಿ 25 ಸೇನಾ ನೆಲೆಗಳ ಮೇಲೆ ಪಾಕ್ ಸೇನೆ ಗುಂಡಿನ ದಾಳಿ ನಡೆಸಿದೆ. ಈ ಭಾಗದಲ್ಲಿನ...

ಪಾಕ್ ನಿಂದ ಗುಂಡಿನ ದಾಳಿ: ಇಬ್ಬರು ನಾಗರಿಕರು ಬಲಿ

ಜಮು-ಕಾಶ್ಮೀರದ ಗಡಿ ಪ್ರದೇಶದಲ್ಲಿ ಪಾಕಿಸ್ತಾನ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಬಿಎಸ್ ಎಫ್ ಯೋಧರನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ ಇಬ್ಬರು ನಾಗರಿಕರು ಸಾವನ್ನಪ್ಪಿದ್ದಾರೆ. ಜಮ್ಮುವಿನ ಅಂತರಾಷ್ಟ್ರೀಯ ಗಡಿ ಭಾಗದ ಆರ್.ಎಸ್.ಪುರ ಸೆಕ್ಟರ್ ಹಾಗೂ ಅರ್ನಿಯಾ ಪ್ರದೇಶಗಳಲ್ಲಿ 22 ಬಿಎಸ್ ಫ್...

ಪಾಕ್ ನಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

ಪಾಕ್ ಸೇನೆ ಮತ್ತೆ ಕದನ ವಿರಾಮ ಉಲ್ಲಂಘನೆ ಮಾಡಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಗಡಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಸೇನಾ ನೆಲೆಗಳ ಮೇಲೆ ಷೆಲ್ ದಾಳಿ ನಡೆಸಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಇದು ಮೂರನೇ ದಾಳಿಯಾಗಿದೆ. ಬಿ.ಎಸ್.ಎಫ್ ಪಡೆಗಳ...

ಜಮ್ಮು-ಕಾಶ್ಮೀರ ವಿಷಯದಲ್ಲಿ ಮತ್ತೆ ಕ್ಯಾತೆ ತೆಗೆದ ಪಾಕಿಸ್ತಾನ

ದೇಶಾದ್ಯಂತ 68ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಮನೆಮಾಡಿದ್ದರೆ, ಅತ್ತ ಪಾಕಿಸ್ತಾನ ಮಾತ್ರ ತನ್ನ ಹಳೇ ಚಾಳಿ ಬಿಡುತ್ತಿಲ್ಲ, ಒಂದೆಡೆ ಗಡಿ ಪ್ರದೇಶಗಳಲ್ಲಿ ಗುಂಡಿನ ದಾಳಿ ನಡೆಸುತ್ತಿದ್ದರೆ, ಇನ್ನೊಂಡೆದೆ ಮತ್ತೆ ಜಮ್ಮು-ಕಾಶ್ಮೀರದ ವಿಷಯ ಪ್ರಸ್ತಾಪಿಸುತ್ತಿದೆ. ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಸಂಬಂಧ ಮುಂದುವರೆಸಲು ಬಯಸುತ್ತದೆ. ಆದರೆ...

ಪಾಕ್ ವಶದಲ್ಲಿದ್ದ ಭಾರತೀಯ ಯೋಧನ ಹಸ್ತಾಂತರ

ಪ್ರವಾಹದಲ್ಲಿ ಸಿಲುಕಿ ಕೊಚ್ಚಿಹೋಗಿ ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಯೋಧ ಸತ್ಯಶೀಲ್ ಯಾದವ್ ಅವರನ್ನು ಪಾಕಿಸ್ತಾನ ಸೇನೆ, ಭಾರತ ಸೇನೆಗೆ ಹಸ್ತಾಂತರಿಸಿದೆ. ಜಮ್ಮು-ಕಾಶ್ಮೀರದ ಆರ್.ಎಸ್.ಪುರ ಸೆಕ್ಟರ್ ಬಳಿಯ ಚೆಕ್ ಪೋಸ್ಟ್ ಗೆ ಬಿ.ಎಸ್.ಎಫ್ ಯೋಧ ಯಾದವ್ ಅವರನ್ನು ಕರೆತಂದ ಪಾಕ್ ಸೇನೆ,...
Rishijobs - Ultimate Job Exchange
Netzume - Resume Website

Other News

Home | Opinion | Sports | Business | Education | Health | Life & Style| Entertainment | Science &Technology | Art & Culture | Terms of Use |
© bangalorewaves. All rights reserved. Developed And Managed by Rishi Systems P. Limited